೪-೧೦-೨೦೧೦ರಂದು ನೀವು ನನ್ನ ಮನೆಗೆ ಬಂದಾಗ ನನ್ನ ಕನ್ನಡದ ಇ ಲೋಕ ಒಂದು ಸಾವಿರ ಪ್ರತಿಗಳು ಮತ್ತು ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ ಎರಡು ಸಾವಿರ ಪ್ರತಿಗಳನ್ನು ಮಾತ್ರ ಮುದ್ರಿಸುವುದಾಗಿ ಮಾತನಾಡಿಕೊಂಡಿದ್ದೇವೆ. ಅದನ್ನು ಬರವಣಿಗೆಯ ಒಪ್ಪಂದ ಮಾಡಿಕೊಂಡಿಲ್ಲ ಎಂಬ ಕಾರಣಕ್ಕೆ ಅಕ್ರಮವಾಗಿ ಮರುಮುದ್ರಣ ಮಾಡಿ ಮಾರಾಟ ಮಾಡುತ್ತಿದ್ದೀರಿ. ನೂರಾರು ಬಾರಿ ಫೋನ್ ಮಾಡಿದರೂ ನನಗೆ ಕೊಡಬೇಕಾದ ಹತ್ತು ಸಾವಿರ ರೂಪಾಯಿ ರಾಯಲ್ಟಿಯನ್ನೂ ಕೊಟ್ಟಿಲ್ಲ. ಇದುವರೆಗಿನ ನನ್ನ ಏಳು ಪತ್ರಗಳಿಗೂ ಉತ್ತರವಿಲ್ಲ. ಮರುಮುದ್ರಣ ಮಾಡಿದ್ದೀರಾ ಎಂದು ರಿಜಿಸ್ಟರ್ಡ್ ಪತ್ರ ಬರೆದರೆ ಅದಕ್ಕೆ ಉತ್ತರವೂ ಇಲ್ಲ.
೪-೧೦-೨೦೧೦ರಂದು ನಾವಿಬ್ಬರು ನನ್ನ ಮನೆಯಲ್ಲಿ ಮಾತನಾಡಿಕೊಂಡದ್ದನ್ನು, ಸತ್ಯ ಸಂಗತಿಯನ್ನು ನೀವು ಪ್ರಾಮಾಣಿಕರಾಗಿದ್ದರೆ ಈ ಕೆಳಗಿನಂತೆ ಬರೆದುಕೊಡಲು ಸಾಧ್ಯವಿದೆ. ಬರೆದುಕೊಟ್ಟು ನಮ್ಮ ನಡುವಿನ ಈ ಸಂಘರ್ಷವನ್ನು ಏಕೆ ನಿಲ್ಲಿಸಬಾರದು.
ಬೆಂಗಳೂರಿನ ಸಾಧನಾ ಪ್ರಕಾಶನದ ರವಿಯಾದ ನಾನು ಮತ್ತು ಉಡುಪಿ ಜಿಲ್ಲೆಯ ಶಿರ್ವದ ಎನ್.ಭವಾನಿಶಂಕರ್ ರವರು ೪-೧೦-೨೦೧೦ರಂದು ಉಡುಪಿಯ ಶಿರ್ವದ ಭವಾನಿಶಂಕರ್ ಅವರ ಮನೆಯಲ್ಲಿ ಭವಾನಿಶಂಕರ್ ಬರೆದ ಕನ್ನಡದ ಇ ಲೋಕ ಒಂದು ಸಾವಿರ ಪ್ರತಿಗಳು ಮತ್ತು ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ ಎರಡು ಸಾವಿರ ಪ್ರತಿಗಳನ್ನು ಮಾತ್ರ ಮುದ್ರಿಸುವುದಾಗಿ ಮಾತನಾಡಿಕೊಂಡಿದ್ದೇವೆ. ನಾನು ಮುದ್ರಿಸಿದ್ದೇನೆ. ನಾನು ಈ ಪ್ರಯುಕ್ತ ಎನ್. ಭವಾನಿಶಂಕರ್‌ರವರಿಗೆ ೧೦,೦೦೦ ಕೊಡಲು ಬಾಕಿ ಇದೆ. ಅದನ್ನು ಕೊಡುತ್ತೇನೆ. ಇದೀಗ ಲೇಖಕರು ಮರುಮುದ್ರಣ ಮಾಡಬಾರದೆಂದಿದ್ದಾರೆ. ನಾನು ಮರುಮುದ್ರಣ ಮಾಡುವುದಿಲ್ಲ.
ಇತಿ
ಸಹಿ
ರವಿ, ಸಾಧನಾ ಪ್ರಕಾಶನ, ಬೆಂಗಳೂರು
ಈ ಒಂದು ಸತ್ಯ ಸಂಗತಿಯನ್ನು ಬರೆಯುವಷ್ಟು ಧೈರ್ಯವೂ ನಿಮಗಿಲ್ಲವೆ. ೩೦೦ಕ್ಕೂ ಹೆಚ್ಚು ಪುಸ್ತಕಗಳನ್ನು ಪಬ್ಲಿಷ್ ಮಾಡಿ ಹಣ ಸಂಪಾದನೆ ಮಾಡುತ್ತಿರುವ ನೀವು, ನನ್ನ ಕೇವಲ ಈ ಎರಡು ಪುಸ್ತಕ, ಇಲ್ಲದಿದ್ದರೆ ಈ ಜಗತ್ತಿನಲ್ಲಿ ಬದುಕಲು ಸಾಧ್ಯವಿಲ್ಲವೆ?
ನನಗೆ ದೇವರು ಒಳ್ಳೆಯ ಸಂಬಳ ಕೊಟ್ಟಿದ್ದಾನೆ. ನಾನು ಹಣಕ್ಕಾಗಿ ಹೋರಾಟ ಮಾಡುತ್ತಿಲ್ಲ. ನಿಮ್ಮ ಸುಳ್ಳು ಹೇಳುವ ಸ್ವಭಾವ, ವಂಚನೆ ಮತ್ತು ಅನ್ಯಾಯದ ವಿರುದ್ಧ ಪ್ರತಿಭಟನೆಯನ್ನು ಮಾಡುತ್ತಿದ್ದೇನೆ.
***
೪-೧೦-೨೦೧೦ರಂದು-ಆ ಕಾಲದಲ್ಲಿ ಬರವಣಿಗೆಯ ಮೂಲಕ ಒಪ್ಪಂದ ಮಾಡಿಸಿಕೊಳ್ಳಬೇಕೆಂಬ ಆಲೋಚನೆ ನನಗೂ ಬರಲಿಲ್ಲ. ನೀವು ಪ್ರಾಮಾಣಿಕರು ಎಂದು ನಾನು ನಂಬಿದ್ದೆ. ನೀವು ನನಗೆ ವಂಚನೆ ಮಾಡಿದ್ದೀರಿ. ನಾನು ಪ್ರತಿಭಟನೆಯನ್ನೂ, ಕಾನೂನಿನ ಹೋರಾಟವನ್ನೂ ಮಾಡುತ್ತೇನೆ. ಇದರ ಜೊತೆಗೆ “ಧರ್ಮಸ್ಥಳದ ಮಂಜುನಾಥ ನೀನೂ ನೋಡಿಕೋ” ಎಂದು ಹರಕೆ ಹೊತ್ತಿದ್ದೇನೆ. ದೇವರ ಭಯವೂ ಇಲ್ಲದ ಮನುಷ್ಯ ಎಂಥಾ ಮನುಷ್ಯ. ನನ್ನ ಎರಡು ಪುಸ್ತಕಗಳು ನಿಮಗೆ ಎಷ್ಟು ದಿನ ಅನ್ನ ಕೊಡಬಹುದು. ಈ ವಂಚನೆಯ ಅನ್ನ ನಿಮಗೆ ಬೇಕೆ?
ನಿಮ್ಮ ವಿಶ್ವಾಸದ
ರವಿ, ಸಾಧನಾ ಬುಕ್ ಹೌಸ್, ನಂ. ೧೫/೧೬ , ಶಿವ ಕಾಂಪ್ಲೆಕ್ಸ್, ಬಳೇ ಪೇಟೆ ಸರ್ಕಲ್, ಬೆಂಗಳೂರು-೫೬೦೦೫೩ ಇವರಿಗೆ------------ಪತ್ರ-೮
ನಿಮ್ಮಲ್ಲಿ ನೈತಿಕ ತಾಕತ್ತಿದ್ದರೆ ನನಗೆ ಸತ್ಯ ಸಂಗತಿಯ ಪತ್ರ ಬರೆಯಿರಿ.
No comments:
Post a Comment