Thursday 30 June 2011


ನಾನು ರವಿಯವರಿಗೆ ಒಪ್ಪಿಗೆ ಕೊಟ್ಟಿದ್ದು “ಕನ್ನಡದ ಇ ಲೋಕ” 1000 ಪ್ರತಿಗಳು ಮತ್ತು “ಕಂಪ್ಯೂಟರ್‌ ಬಗ್ಗೆ ಏನೂ ತಿಳಿಯದವರಿಗಾಗಿ” 2000 ಪ್ರತಿಗಳನ್ನು ಮಾತ್ರ ಮುದ್ರಿಸಲು. ಈ ಪುಸ್ತಕಗಳ ಬಾಕಿ  ರಾಯಲ್ಟಿ 10,000 ರೂಪಾಯಿಯನ್ನೇ ನನಗೆ ಕೊಟ್ಟಿಲ್ಲ

 ಮರು ಮುದ್ರಣಕ್ಕೆ ಮುಂಚೆ ತಿಳಿಸಬೇಕೆಂದು ಹೇಳಿದರೂ ತಿಳಿಸದೆ ಮರು ಮುದ್ರಣ ಮಾಡಿದ್ದಾರೆ. ಅದರ ರಾಯಲ್ಟಿಯೂ ಇಲ್ಲ.

ನನಗೆ ತಿಳಿದಂತೆ ಲೇಖಕರಿಂದ ಅನುಮತಿ ಪಡೆಯುವಾಗ ವಿನಯದ ವರ್ತನೆ ತೋರಿಸಿ ಅನಂತರ ಅವರಿಗೆ ಪುಸ್ತಕದ ಒಂದು ಪ್ರತಿಯನ್ನೂ ಕೊಡದ ವ್ಯಕ್ತಿಗಳಿದ್ದಾರೆ. ಇಂತಹ ಅನೇಕ ಪ್ರಸಂಗಗಳು ನನ್ನ ಬಳಿ ಇವೆ. ನನಗಾದ ಅನ್ಯಾಯವನ್ನು ನಾನು ಪ್ರತಿಭಟಿಸುತ್ತಿದ್ದೇನೆ. ದಯವಿಟ್ಟು ಬೆಂಬಲಿಸಿ.    

ಲೇಖಕರಿಗೆ ತಿಳಿಸದೆ ಪುಸ್ತಕವನ್ನು ಮರುಮುದ್ರಿಸಿ ಮಾರಾಟ ಮಾಡುವ ಬೆಂಗಳೂರಿನ ಸಾಧನಾ ಪ್ರಕಾಶನದ
ರವಿಯವರ ಬಗ್ಗೆ----------
ನನ್ನ ಹೋರಾಟವನ್ನು ಬೆಂಬಲಿಸುವುದಕ್ಕಾಗಿ  ದಯವಿಟ್ಟು ನನಗೊಂದು ಪತ್ರ ಬರೆಯಿರಿ.

ನಿಮ್ಮ ಪತ್ರಗಳು ನನ್ನ ಪ್ರತಿಭಟನೆಯ ಅಸ್ತ್ರಗಳು.

ರವಿಯವರಿಂದ ನನ್ನ ರೀತಿಯಲ್ಲಿ ಮೋಸ ಹೋದವರು ತಮ್ಮ ಅನುಭವವನ್ನು ನನ್ನ ವಿಳಾಸಕ್ಕೆ ಬರೆಯಿರಿ. ನಿಮ್ಮ ಹೆಸರನ್ನು ಪ್ರದರ್ಶಿಸುವುದಿಲ್ಲ. 

ಸಾರ್ವಜನಿಕ ಅಭಿಪ್ರಾಯವನ್ನು ಮೂಡಿಸಿದ ಅನಂತರ ನಾನು ಕಾನೂನು ಕ್ರಮವನ್ನು ಆರಂಭಿಸುತ್ತೇನೆ.

ರವಿಯವರಿಂದ ಮೋಸ ಹೋದ ಅನೇಕರು ನನಗೆ ಮಾಹಿತಿ ನೀಡಿದುದಕ್ಕಾಗಿ ಧನ್ಯವಾದಗಳು.
"ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ" ಮತ್ತು "ಕನ್ನಡದ ಇ ಲೋಕ" ಎಂಬ ಜನಪ್ರಿಯ ಕೃತಿಗಳನ್ನು ಲೇಖಕರಿಗೆ ತಿಳಿಸದೆ ಮರು ಮುದ್ರಣ ಮಾಡಿ ಮಾರಾಟ ಮಾಡುತ್ತಿರುವ ರವಿ, ಸಾಧನಾ ಬುಕ್ ಹೌಸ್, ನಂ. 15/16 , ಶಿವ ಕಾಂಪ್ಲೆಕ್ಸ್, ಬಳೇ ಪೇಟೆ ಸರ್ಕಲ್, ಬೆಂಗಳೂರು-560053 ಇವರ ವ್ಯವಹಾರದ ಬಗ್ಗೆ

     ನನ್ನ "ಕನ್ನಡದ ಇ ಲೋಕ" ಎಂಬ ಕೃತಿ ಬಿಡುಗಡೆಯಾಗಿ ಜನಪ್ರಿಯತೆಯನ್ನು ಪಡೆದಿತ್ತು. ಈ ಸಂದರ್ಭದಲ್ಲಿ ರವಿಯವರು ೪-೧೦-೨೦೧೦ರಂದು ಉಡುಪಿ ಜಿಲ್ಲೆಯ ಶಿರ್ವದ ನನ್ನ ಮನೆಗೆ ಬಂದು ತಾನು ಅದನ್ನು ಎರಡನೆಯ ಮುದ್ರಣ ಮಾಡುವುದಾಗಿ ಹೇಳಿದರು ಮತ್ತು ನನ್ನ ಬಳಿ ಇದ್ದ "ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ" ಎಂಬ ಅಪ್ರಕಟಿತ ಕೃತಿಯನ್ನು ಪ್ರಕಟಿಸುವುದಾಗಿ ಹೇಳಿದರು. ನಾನು "ಕನ್ನಡದ ಇ ಲೋಕ" 1000 ಪ್ರತಿಗಳು ಮತ್ತು "ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ" 2000 ಪ್ರತಿಗಳನ್ನು ಮಾತ್ರ ಮುದ್ರಿಸಬೇಕೆಂದು ಹೇಳಿದೆ. ಈ ಬಗ್ಗೆ 10 ಶೇಕಡಾ ರಾಯಲ್ಟಿ ಕೊಡಬೇಕೆಂದು ಒಪ್ಪಿಗೆಯಾಯಿತು.

     ಪುಸ್ತಕ ಪ್ರಕಟವಾದ ಮೇಲೆ ಹಣವನ್ನು ನಾಳೆ, ಬುಧವಾರ, ಮುಂದಿನ ಸೋಮವಾರ, ೨೮ನೇ ತಾರೀಕಿಗೆ......ಹೀಗೆ ಬ್ಯಾಂಕಿಗೆ ಹಾಕುತ್ತೇನೆಂದು ಹೇಳುವುದು ಮತ್ತು ಆ ದಿನ ಹಾಕದೇ ಇರುವುದು. ನಾನು ಅವರು ಹೇಳಿದ ಮರುದಿನ ಏಕೆ ಹಾಕಿಲ್ಲ ಎಂದು ಕೇಳಿದರೆ ಇನ್ನೊಂದು ದಿನವನ್ನು ಸೂಚಿಸುತ್ತಿದ್ದರು. ಇಂತ ಮಾತುಕತೆ ಕನಿಷ್ಠ ನೂರಕ್ಕೂ ಹೆಚ್ಚು ಬಾರಿ ನಡೆದಿದೆ. ಒಂದು ದಿನ ಫೋನಿನಲ್ಲಿ ಬಿಸಿ ಬಿಸಿ ಮಾತಾಗಿ "ನೀನೊಬ್ನೆ ಏನೋ ಕಂಪ್ಯೂಟರ್ ಪುಸ್ತಕ ಬರೆಯೋನು" ಎಂದರು. ಹೀಗೆ ಹೇಳಿದವರು ಈಗ ನನ್ನ ಪುಸ್ತಕವನ್ನು ಅನಧಿಕೃತವಾಗಿ ಮರು ಮುದ್ರಣ ಮಾಡಿದ್ದಾರೆ.

     ನಮ್ಮ ನಡುವೆ ಆದ ಒಪ್ಪಂದದ ಪ್ರಕಾರ ಒಂದು ತಿಂಗಳಲ್ಲಿ ಎಲ್ಲಾ ಹಣ ಕೊಡಬೇಕಿತ್ತು. ಮೊದಲ ಮುದ್ರಣದ ಅಷ್ಟು ಇಷ್ಟು ಹಣ ಕೊಟ್ಟ ಅನಂತರ ಬಾಕಿ ಉಳಿದ ಹತ್ತು ಸಾವಿರ ರೂಪಾಯಿ ಇನ್ನೂ ಕೊಟ್ಟಿಲ್ಲ. ಆ ಹಣವನ್ನು ಕೊಡದೆ ಈಗ ಮರುಮದ್ರಣ ಮಾಡಿದ್ದಾರೆ.

     ನನಗೆ ಕೊಡಬೇಕಾದ ಹಣದ ಬಗ್ಗೆ, ನನ್ನ ಕೃತಿಗಳನ್ನು ಮರು ಮುದ್ರಣ ಮಾಡಬಾರದೆಂಬುದರ ಬಗ್ಗೆ ಅನೇಕ ಪತ್ರಗಳನ್ನು ಬರೆದೆ. ಅವರು ಯಾವುದಕ್ಕೂ ಉತ್ತರ ಬರೆದಿಲ್ಲ. ಅನಂತರ ಫೋನ್‌ನಲ್ಲಿ ಮಾತನಾಡಿದಾಗ ಅವರು ತಣ್ಣಗೆ ಮಾತನಾಡಿದರು. ಧರ್ಮಸ್ಥಳ ದೇವರಾಣೆಗೂ ಮರು ಮುದ್ರಣ ಮಾಡಿಲ್ಲ ಎಂದರು. ನನ್ನ ಮನೆಗೆ ಬಂದು ಮುಂದಿನ ಮುದ್ರಣ ಮತ್ತು ರಾಯಲ್ಟಿಯ ಬಗ್ಗೆ ಮಾತನಾಡುತ್ತೇನೆಂದರು. ನಾನು ಈ ಮನುಷ್ಯನನ್ನು ನಂಬಿದೆ. ಮರು ಮುದ್ರಣ ಮಾಡುವುದಿದ್ದರೆ ನನಗೆ ತಿಳಿಸಿ ಮಾಡಬೇಕು, ನಿಮಗೆ ನಷ್ಟ ಆಗಬಾರದು ಎಂಬ ಕಾರಣಕ್ಕೆ ನನಗೆ ಕೊಡುವ ರಾಯಲ್ಟಿ ನೀವೇ ನಿರ್ಧರಿಸಿ ಎಂದು ಪತ್ರ ಬರೆದೆ. ಅವರು ನನ್ನ ಮನೆಗೂ ಬಂದಿಲ್ಲ, ಮರು ಮುದ್ರಣದ ಬಗ್ಗೆ ತಿಳಿಸಲೂ ಇಲ್ಲ. ರಾಯಲ್ಟಿ ನಿರ್ಧರಿಸಲೂ ಇಲ್ಲ. ಈಗ ಪುಸ್ತಕದ ಮರು ಮುದ್ರಣ ಮಾಡಿದ್ದಾರೆ. ನನ್ನ ಎರಡೂ ಕೃತಿಯ ಹೆಸರುಗಳನ್ನು ಅವರು ಪುಸ್ತಕದ ಅಂಗಡಿಗಳಿಗೆ ಕೊಡುವ ಅಂಗಡಿಯವರು ಆರ್ಡರ್ ಮಾಡುವ ಪಟ್ಟಿಯಲ್ಲಿ ಸೇರಿಸಿದ್ದಾರೆ. ಅಂದರೆ ಪುಸ್ತಕದ ಅಂಗಡಿಯವರು ನನ್ನ ಪುಸ್ತಕಗಳನ್ನು ಅವರಿಗೆ ಆರ್ಡರ್ ಮಾಡಬಹುದು. ಇದು ವಂಚನೆ.

     ಪುಸ್ತಕ ಲೋಕದಲ್ಲಿ ಎರಡು ಅಪ್ರಿಯ ಸಂಗತಿಗಳಿವೆ. ಮೊದಲನೆಯದು ಒಬ್ಬ ಲೇಖಕನ ಬಳಿಗೆ ಹೋಗಿ ೧೦೦೦ ಪ್ರತಿ ಪ್ರಕಟಿಸುತ್ತೇನೆಂದು ತೆಗೆದುಕೊಳ್ಳುವುದು, ಅನಂತರ ಲೇಖಕನ ಒಪ್ಪಿಗೆ ಪಡೆಯದೆ ಸಾವಿರಗಟ್ಟಲೆ ಮರು ಮುದ್ರಣ ಮಾಡಿ ಮಾರಾಟ ಮಾಡುವುದು. ಹೀಗೆ ಮಾಡುವಾಗ ಮರುಮುದ್ರಣದ ಪುಸ್ತಕ ಹಿಂದಿನ ಪುಸ್ತಕದಂತೆ ಇರುವ ಹಾಗೆ ನೋಡಿಕೊಳ್ಳುವುದು. ಎರಡನೆಯದು ಈಗಾಗಲೆ ಮುದ್ರಿತವಾದ ಕೃತಿಯನ್ನು ಕದ್ದು ಮುದ್ರಿಸಿ ಮಾರಾಟ ಮಾಡುವುದು. ನನ್ನ ವಿಷಯದಲ್ಲಿ ಬಳಕೆಯಾಗಿರುವುದು ಮೊದಲನೆಯ ವಿಧಾನ. ಆದರೆ ಅವರು ಪುಸ್ತಕದ ಬೆಲೆಯನ್ನು ಬದಲಾಯಿಸುವುದರ ಮೂಲಕ ಸಿಕ್ಕಿಬಿದ್ದಿದ್ದಾರೆ. ಅಂದರೆ ಅವರ ಪ್ರಕಾಶನದ ಹೆಸರಿನಲ್ಲಿ ಎರಡು ಬಗೆಯ ಪುಸ್ತಕಗಳಿವೆ. ಅವರು ಅನೈತಿಕ ಕೆಲಸ ಮಾಡಿದ್ದಕ್ಕೆ ಅವರೇ ಸಾಕ್ಷಿ ನೀಡಿದ್ದಾರೆ.

     ರವಿಯವರ ಅನ್ಯಾಯವನ್ನು ಪ್ರತಿಭಟಿಸುವುದು ನನಗೆ ಮುಖ್ಯವಾಗಿತ್ತು. ರವಿಯವರು ಮರುಮುದ್ರಣ ಮಾಡಬಹುದು ಎಂಬ ಸಂದೇಹವಿದ್ದ ಕಾರಣಕ್ಕಾಗಿ ನನ್ನ ಪುಸ್ತಕಗಳನ್ನು ಅವರಿಗೆ ತಿಳಿಸಿ ನಾನೇ ಮುದ್ರಿಸಿದೆ. ಅವರ ಪುಸ್ತಕದ ಒಳಗೆ ಅತಿ ದೊಡ್ಡ ಅಕ್ಷರಗಳಿದ್ದು 160 ಪುಟಗಳಿವೆ. ನಿಜವಾಗಿಯೂ ಇದು 100 ಪುಟಗಳಷ್ಟು ಆಗಬಹುದಾದ ಪುಸ್ತಕ. ದಯವಿಟ್ಟು ರವಿಯವರ ಸಾಧನಾ ಪ್ರಕಾಶನದ ಈ ಪುಸ್ತಕವನ್ನು ಯಾರೂ ಖರೀದಿಸಬೇಡಿ.

     "ಕಂಪ್ಯೂಟರ್ ಬಗ್ಗೆ.." ಪುಸ್ತಕದ ಎರಡನೆಯ ಮತ್ತು ಮೂರನೆಯ ಮುದ್ರಣವನ್ನು ನಾನೇ ಮಾಡಿದ್ದೇನೆ. ಅಕ್ಷರ ಚಿಕ್ಕದು ಮಾಡಿ 24 ಪುಟಗಳನ್ನು ಹೆಚ್ಚು ಸೇರಿಸಿದ್ದೇನೆ.  "ಕನ್ನಡದ ಇ ಲೋಕ"ದ ಮೂರನೆಯ ಮುದ್ರಣ ಮಾಡಿದ್ದೇನೆ. ಅನೇಕ ಪುಟಗಳನ್ನು ಸೇರಿಸಿದ್ದೇನೆ. ರವಿಯವರಿಗೆ ಆರಂಭದಿಂದ ಇದುವರೆಗೆ ಕೊರಿಯರ್ ಅಥವಾ ರಿಜಿಸ್ಟರ್‍ಡ್ ಪೋಸ್ಟ್‌ನ ಮೂಲಕ 7 ಪತ್ರ ಬರೆದಿದ್ದೇನೆ. ಎಲ್ಲಾ ದಾಖಲೆಗಳನ್ನು ಇರಿಸಿದ್ದೇನೆ. ಅವರಿಂದ ಒಂದಕ್ಕೂ ಉತ್ತರ ಬಂದಿಲ್ಲ. 
     ನನ್ನ, ಜನ ಮೆಚ್ಚಿದ ಈ ಪುಸ್ತಕವನ್ನು ಪ್ರತಿಯೊಂದು ಮುದ್ರಣಕ್ಕೂ ಹೆಚ್ಚು ವಿಷಯವನ್ನು ಸೇರಿಸುತ್ತ, ಬೈಂಡ್ ಬದಲಾಯಿಸುತ್ತ, ಅಂಗಡಿ ಮತ್ತು ಶಾಲೆಗಳಿಗೆ ಚೀಲ ಹಿಡಿದುಕೊಂಡು ಹೋಗಿ ಅಸಲು ಬೆಲೆಗೆ ಮಾರಾಟ ಮಾಡುತ್ತಿರುವುದು ಲಾಭಕ್ಕಾಗಿ ಅಲ್ಲ. ರವಿಯವರ ವಿರುದ್ಧದ ಪ್ರತಿಭಟನೆಗಾಗಿ. ನಾನು ಸುಮ್ಮನೆ ಕುಳಿತರೆ ಅವರು ನನಗೆ ತಿಳಿಸದೆ ಮರು ಮುದ್ರಣ ಮಾಡುತ್ತಾ ಹೋಗುತ್ತಾರೆ. ರವಿಯವರಿಂದ ಅಥವಾ ಇತರರಿಂದ ನನ್ನ ರೀತಿಯಲ್ಲಿ ಮೋಸ ಹೋದವರು ತಮ್ಮ ಅನುಭವವನ್ನು ನನ್ನ ವಿಳಾಸಕ್ಕೆ ಬರೆಯಿರಿ.
     ಬೆಂಗಳೂರಿನ ಪೋಲಿಸ್ ಮಹಾನಿರ್ದೇಶಕರು ದಯವಿಟ್ಟು ನನಗೆ ನ್ಯಾಯವನ್ನು ಒದಗಿಸಿಕೊಡಬೇಕು. ಯಾವುದೇ ಅಂಗಡಿಯಲ್ಲಿರುವ ರವಿಯವರ ಎರಡನೆಯ ಮುದ್ರಣದ ಕೃತಿಯನ್ನು ವಶಪಡಿಸಿಕೊಳ್ಳಬೇಕು. ಮಾನ್ಯ ಗೃಹ ಮಂತ್ರಿಗಳು ಈ ರೀತಿಯ ಅವ್ಯವಹಾರಗಳನ್ನು ನಿಯಂತ್ರಿಸಬೇಕು. ಸರಕಾರೀ ಲೈಬ್ರರಿ ಈ ಅನಧಿಕೃತ ಪುಸ್ತಕಗಳನ್ನು ಖರೀದಿಸಬಾರದು. ಕರ್ನಾಟಕದ ದೃಶ್ಯ ಮಾಧ್ಯಮಗಳು, ಜನಪರ ಪತ್ರಿಕೆಗಳು ನನ್ನಂತಹ ಅನೇಕ ಲೇಖಕರಿಗೆ ಅನ್ಯಾಯ ಮಾಡುವ ಇಂತಹ ಪ್ರಕಾಶಕರ ಬಗ್ಗೆ  ದಯವಿಟ್ಟು ಬರೆದು ಚರ್ಚಿಸಿರಿ. ಇಂತಹ ಅನ್ಯಾಯ ಬಹಳ ಜನರಿಗೆ ಆಗಿದೆ. ಈ ಪತ್ರವನ್ನು ಓದಿದವರು ದಯವಿಟ್ಟು ಇದನ್ನು ನಿಮಗೆ ಗೊತ್ತಿರುವ ಪುಸ್ತಕದ ಅಂಗಡಿಗಳಿಗೆ  ತಿಳಿಸಿರಿ. ನನ್ನ ಮಿತ್ರರಾದ ಬ್ಲಾಗಿಗರು ದಯವಿಟ್ಟು ಈ ಬಗ್ಗೆ ನಿಮ್ಮ ಬ್ಲಾಗಿನಲ್ಲಿ ಬರೆಯಿರಿ. ಇಮೈಲ್ ಮೂಲಕ ಇತರರಿಗೆ ತಿಳಿಸಿರಿ. ಫೇಸ್‌ಬುಕ್‌ನಲ್ಲಿ ಬರೆಯಿರಿ. ಈ ಅಕ್ರಮವನ್ನು ನಿಲ್ಲಿಸಲು ಸಹಕರಿಸಿರಿ.

ಕನ್ನಡದ ಸಾಹಿತಿಗಳು ಮತ್ತು ಇತರರು ನನ್ನನ್ನು ಬೆಂಬಲಿಸಿ ನನ್ನ ವಿಳಾಸ ಅಥವಾ ನನ್ನ ಇಮೈಲ್ ವಿಳಾಸಕ್ಕೆ ದಯವಿಟ್ಟು ಪತ್ರ ಬರೆಯಿರಿ. ಇಮೈಲ್ ವಿಳಾಸ- prathibhatane@gmail.com

-ಇಂದ-ಎನ್. ಭವಾನಿಶಂಕರ್, ಸಾನ್ನಿಧ್ಯ ಆಕರ್ೇಡ್, ಸಿಂಡಿಕೇಟ್ ಬ್ಯಾಂಕ್ನ ಎದುರುಗಡೆ, ಅಂಚೆ-ಶಿರ್ವ, ಉಡುಪಿ ಜಿಲ್ಲೆ 574116 (ಮೊಬೈಲ್-9242 232323)

ರವಿಯವರ ಸಾಧನಾ ಪ್ರಕಾಶನದ ಈ ಅನಧಿಕೃತ ಪುಸ್ತಕಗಳನ್ನು ಖರೀದಿಸಬೇಡಿ    
ಕೆಳಗಿನ ಎರಡು ಪುಸ್ತಕಗಳನ್ನು ಸಾಧನಾ ಪ್ರಕಾಶನದ ರವಿಯವರು ಮುದ್ರಿಸಿದ್ದಾರೆ. ಈ ಪುಸ್ತಕದ ಬಾಕಿ ಉಳಿದ ಹತ್ತು ಸಾವಿರ ರೂಪಾಯಿಗಳ ಗೌರವಧನವನ್ನೇ ಕೊಟ್ಟಿಲ್ಲ-ಎರಡನೆಯ ಮುದ್ರಣಕ್ಕೆ ಅನುಮತಿಯನ್ನೂ ಪಡೆದಿಲ್ಲ-ಇವುಗಳನ್ನು ಪುನಃ ಮುದ್ರಿಸಿದ್ದಾರೆ.

     "ಕನ್ನಡದ ಇ ಲೋಕ"ದ ಬೆಲೆ 84 ರೂಪಾಯಿ ಇರಿಸಿದ್ದನ್ನು ಅವರ ಎರಡನೆಯ ಅನಧಿಕೃತ ಮುದ್ರಣದಲ್ಲಿ 80 ರೂಪಾಯಿ ಇರಿಸಿದ್ದಾರೆ. ಇದು ಇತ್ತೀಚೆಗೆ ಪ್ರಕಟವಾದ ಅವರ ಬೆಲೆ ಪಟ್ಟಿಯಲ್ಲಿದೆ. ಇದು ಅವರು ಮರು ಮುದ್ರಣ ಮಾಡಿರುವುದಕ್ಕೆ ಸಾಕ್ಷಿ.

ಎನ್. ಭವಾನಿಶಂಕರ್‌ರವರ ಪವಿತ್ರ ಪ್ರಕಾಶನದ ಈ ಪುಸ್ತಕಗಳನ್ನು ಖರೀದಿಸಿರಿ.
ಇವುಗಳಲ್ಲಿ 24 ಪುಟಗಳಷ್ಟು ಹೆಚ್ಚು ಮಾಹಿತಿ ಇದೆ. ಅನೇಕ ತಿದ್ದುಪಡಿ ಮಾಡಲಾಗಿದೆ.
    
ರವಿಯವರು ಸ್ವಭಾವವನ್ನು ಗ್ರಹಿಸಿದ ನಾನು ನನ್ನ ಪುಸ್ತಕಗಳನ್ನು, ನನ್ನ ಒಪ್ಪಿಗೆ ಪಡೆಯದೆ, ನನಗೆ ಗೌರವಧನ ಕೊಡದೆ ಮರುಮುದ್ರಿಸಿ ಅಚ್ಚು ಹಾಕಿ ಮಾರಾಟ ಮಾಡುತ್ತಾರೆ ಎಂಬ ಸಂಶಯವಿದ್ದ ಕಾರಣಕ್ಕಾಗಿ ನಾನೇ ಪ್ರಕಟಿಸಿದೆ.

     "ಕನ್ನಡದ ಇ ಲೋಕ"ದ ಮುಖ ಪುಟದಲ್ಲಿ ನಾನು ಸ್ವಲ್ಪ ಬದಲಾವಣೆ ಮಾಡಿದ್ದೇನೆ. ಮುಖಪುಟದ ಮಧ್ಯಭಾಗದ ಬರವಣಿಗೆಯಲ್ಲಿ ಬದಲಾವಣೆ ಮಾಡಿದ್ದೇನೆ. ಅದು "ಬ್ಲಾಗ್ ಎಂದರೆ.." ಎಂಬ ಪದದಿಂದ ಆರಂಭವಾಗುತ್ತದೆ. ಈ ಪುಸ್ತಕಕ್ಕೆ ಅನೇಕ ಹೊಸ ಮಾಹಿತಿಯನ್ನು ಸೇರಿಸಿದ್ದೇನೆ. ಈ ಪುಸ್ತಕ "ಕನ್ನಡದ ಇ ಲೋಕ-ಇಂಟರ್‌ನೆಟ್ ಕಲಿಯಿರಿ" ಎಂಬ ದೊಡ್ಡ ಅಕ್ಷರಗಳ ಹೆಸರಿನೊಂದಿಗೆ ೫ನೇ ಬಾರಿ ಮರು ಮುದ್ರಣಗೊಂಡಿದೆ.

            "ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ" ಪುಸ್ತಕವನ್ನು ಎರಡು ಬಾರಿ ಮುದ್ರಿಸಿದ್ದೇನೆ. ಮುಖ ಪುಟ ಪೂರ್ತಿಯಾಗಿ ಬೇರೆ. ಮೊದಲನೆಯದು ಹಳದಿ ಬಣ್ಣ. ಎರಡನೆಯದು ಕೆಂಪು ಬಣ್ಣ. ಮೊದಲ ಬಾರಿ 10 ಪುಟಗಳಷ್ಟು ವಿಷಯವನ್ನು, ಎರಡನೆಯ ಬಾರಿ 12 ಪುಟಗಳಷ್ಟು ವಿಷಯವನ್ನು ಸೇರಿಸಿದ್ದೇನೆ. ಅಕ್ಷರ ಚಿಕ್ಕದು ಮಾಡಿದ್ದೇನೆ. ಇನ್ನು ಮುಂದೆಯೂ ಹೊಸ ವಿಷಯಗಳನ್ನು ಸೇರಿಸುತ್ತೇನೆ. ಬೈಂಡ್ ಬದಲಾಯಿಸುತ್ತೇನೆ.

  
ರವಿಯವರಿಂದ ಮೋಸ ಹೋದ ಅನೇಕರು ನನಗೆ ಮಾಹಿತಿ ನೀಡಿದುದಕ್ಕಾಗಿ ಧನ್ಯವಾದಗಳು.
ನನ್ನ ಪುಸ್ತಕಗಳು ದೊರೆಯುವ ಸ್ಥಳ.

1. ನವ ಕರ್ನಾಟಕ ಪಬ್ಲಿಕೇಶನ್ಸ್, ಕ್ರೆಸೆಂಟ್ ರೋಡ್, ಬೆಂಗಳೂರು. 080-22203580/81/82,
2. ನವ ಕರ್ನಾಟಕ ಪಬ್ಲಿಕೇಶನ್ಸ್, ಹಂಪನಕಟ್ಟಾ, ಮಂಗಳೂರು. 0824-2441016
3 ಸಪ್ನಾ ಬುಕ್‌ ಹೌಸ್‌, ಗಾಂಧಿನಗರ, ಬೆಂಗಳೂರು, 4. ಸಾಹಿತ್ಯ ಕೇಂದ್ರ, ಮುಖ್ಯ ಅಂಚೆ ಕಚೇರಿ ಬಳಿ, ಹಂಪನಕಟ್ಟಾ,  ಮಂಗಳೂರು. 0824-2412437
080-40114455

5. ಅತ್ರಿ ಬುಕ್ ಸೆಂಟರ್ ಬಲ್ಮಠ, ಮಂಗಳೂರು. 08242425161
6. ಸೀತಾ ಬುಕ್‌ ಹೌಸ್‌, ಚಿತ್ತರಂಜನ್‌ ಸರ್ಕಲ್‌, ಉಡುಪಿ,
9901728373
7. ಪವಿತ್ರ ಪ್ರಕಾಶನ, ಸಿಂಡಿಕೇಟ್ ಬ್ಯಾಂಕ್ ಹತ್ತಿರ, ಶಿರ್ವ, ಉಡುಪಿ. 9242 232323

ಇಲ್ಲಿಂದ ಖರೀದಿಸಬಹುದು.

ಕಡಿಮೆ ಸಂಖ್ಯೆಯ ಪುಸ್ತಕಗಳನ್ನು ಕೊರಿಯರ್ ಮೂಲಕ ಖರೀದಿಸಬಹುದು. 9242 232323
ನನ್ನ ಪುಸ್ತಕಗಳಾದ ೧. ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ ೨. ಕನ್ನಡದ ಇ ಲೋಕ ೩. ಕಾರ್ ಡ್ರೈವಿಂಗ್ ಮತ್ತು ನಿರ್ವಹಣೆ ೪. ಗೆಲ್ಲುವ ದಾರಿಗಳು ಇಲ್ಲಿವೆ-ಈ ಪುಸ್ತಕಗಳನ್ನು ಕರ್ನಾಟಕದ ಪುಸ್ತಕ ಪ್ರಕಾಶಕರು ನನ್ನ ಜೊತೆಗೆ ಒಪ್ಪಂದ ಮಾಡಿಕೊಂಡು ಪ್ರಕಾಶನ ಮಾಡಿಕೊಂಡು ಲಾಭ ಮಾಡಿಕೊಳ್ಳಬಹುದು. ಪುಸ್ತಕ ನಾನೇ ಅಚ್ಚು ಹಾಕಿಸಿಕೊಡುತ್ತೇನೆ. ಇದು ರವಿಯವರ ವಿರುದ್ಧದ ಪ್ರತಿಭಟನೆಗಾಗಿ. ಹಣ ನನಗೆ ಎರಡನೆಯ ವಿಚಾರ. ಸಂಪರ್ಕಿಸಿರಿ-9242232323.

Saadhana Ravi Cheating, Kannadada E loka, Computer bagge Enu tiliyadavarigagi,