N. Bhavani Shankar, St. Mary's College, Shirva, Udupi Dt.
ರವಿಯವರೆ, ಎನ್.ಭವಾನಿಶಂಕರ್‌ರವರ ಕನ್ನಡದ ಇ ಲೋಕ ಮತ್ತು ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ ಪುಸ್ತಕಗಳಿಗೆ ಸಂಬಂಧಿಸಿದ ಒಪ್ಪಂದದ ಮುಕ್ತಾಯ ಪತ್ರ ಬರೆದುಕೊಡಿ
ರವಿಯವರೆ, ಎನ್.ಭವಾನಿಶಂಕರ್‌ರವರ ಕನ್ನಡದ ಇ ಲೋಕ ಮತ್ತು ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ ಪುಸ್ತಕಗಳಿಗೆ ಸಂಬಂಧಿಸಿದ ಒಪ್ಪಂದದ ಮುಕ್ತಾಯ ಪತ್ರ ಬರೆದುಕೊಡಿ
೦೪-೧೦-೨೦೧೦ ರಂದು ಎನ್. ಭವಾನಿಶಂಕರ್, ಪ್ರೊಫೆಸರ್, ಸಾನ್ನಿಧ್ಯ ಆರ್ಕೇಡ್, ಮೊದಲ ಮಾಳಿಗೆ, ಸಿಂಡಿಕೇಟ್ ಬ್ಯಾಂಕ್ ಎದುರು, ಅಂಚೆ-ಶಿರ್ವ, ಉಡುಪಿ ಜಿಲ್ಲೆ-೫೭೪೧೧೬ ಇವರ ಬಳಿ ಮೌಕಿಕ ಒಪ್ಪಂದ ಮಾಡಿಕೊಂಡಂತೆ ಕನ್ನಡದ ಇ ಲೋಕದ ೧೦೦೦ ಪ್ರತಿಗಳನ್ನು ಮತ್ತು ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ ದ ೨೦೦೦ ಪ್ರತಿಗಳನ್ನು ಶ್ರೀ ರವಿ, ಸಾಧನಾ ಬುಕ್ ಹೌಸ್, ನಂ. ೧೫/೧೬ , ಶಿವ ಕಾಂಪ್ಲೆಕ್ಸ್, ಬಳೇ ಪೇಟೆ ಸರ್ಕಲ್, ಬೆಂಗಳೂರು-೫೬೦೦೫೩ ಎಂಬ ನಾನು ಮುದ್ರಿಸಿದ್ದೇನೆ. ಇಲ್ಲಿಗೆ ನನ್ನ ಮತ್ತು ಲೇಖಕರ ನಡುವಿನ ಎಲ್ಲಾ ಒಪ್ಪಂದ ಮುಕ್ತಾಯವಾಗಿದೆ. ಈ ಪುಸ್ತಕಗಳನ್ನು ಮರು ಮುದ್ರಣ ಮಾಡುವ ಹಕ್ಕು ನನಗೆ ಇಲ್ಲ. ಮರು ಮುದ್ರಣ ಮಾಡುವುದಕ್ಕೆ ಲೇಖಕರ ಒಪ್ಪಿಗೆ ಇಲ್ಲ. ನಾನು ಈ ಪುಸ್ತಕಗಳನ್ನು ಮರುಮುದ್ರಣ ಮಾಡುವುದಿಲ್ಲ. ನನ್ನ ಬಳಿ ಇರುವ ಈ ಎರಡು ಪುಸ್ತಕಗಳ ಎಲ್ಲಾ ಫಿಲ್ಮ್‌ಗಳು, ಪ್ಲೇಟ್‌ಗಳು, ಬೈಂಡಿನ ಪೊಸಿಟಿವ್, ಪುಸ್ತಕ ವಿಷಯದ ಡೀವೀಡಿಗಳನ್ನು ನಾಶಪಡಿಸಿರುತ್ತೇನೆ. ನನಗೆ ಸಂಬಂಧಿಸಿದ ಡಿಟಿಪಿ ಆಪರೇಟರ್, ಮುದ್ರಣಾಲಯ ಮತ್ತು ಇತರ ಕಂಪ್ಯೂಟರ್‌ಗಳಲ್ಲಿರುವ ಈ ಪುಸ್ತಕದ ಎಲ್ಲಾ ಫೈಲುಗಳನ್ನು ಅಳಿಸಿಹಾಕಿದ್ದೇನೆ. ಲೇಖಕರಿಂದ ನಾನು ಪಡೆದಂತಹ ಎರಡು ಪುಸ್ತಕಗಳ ಸೀಡಿ ಅಥವಾ ಫೈಲುಗಳು ಇತರರ ಬಳಿ ಹೋದರೆ ಅದಕ್ಕೆ ನಾನೇ ಜವಾಬ್ದಾರನಾಗಿರುತ್ತೇನೆ. ನಾನು ಈ ತನಕ ಒಟ್ಟು ೪೦೦೦ ಪ್ರತಿಗಳನ್ನು ಮಾತ್ರ ಮುದ್ರಿಸಿದ್ದು ನನ್ನ ಬಳಿ ಆ ಪುಸ್ತಕದ ಸ್ಟಾಕ್ ಇರುವುದಿಲ್ಲವೆಂದು ಪ್ರಮಾಣೀಕರಿಸುತ್ತೇನೆ. ಎನ್.ಭವಾನಿಶಂಕರ್‌ರವರ ಪುಸ್ತಕಗಳ ಹೆಸರನ್ನು ಇಂದಿನಿಂದ ಒಂದು ತಿಂಗಳಿನಲ್ಲಿ ನನ್ನ ಪುಸ್ತಕ ಪಟ್ಟಿಯಿಂದ ತೆಗೆದು ಹಾಕುತ್ತೇನೆ.ಒಂದು ತಿಂಗಳಿನ ಅನಂತರ ಈ ಪುಸ್ತಕಗಳ ಹೆಸರುಗಳು ನನ್ನ ಪುಸ್ತಕ ಪಟ್ಟಿಯಲ್ಲಿರುವುದಿಲ್ಲ.
ತಾರೀಕು________ ನಿಮ್ಮ ವಿಶ್ವಾಸದ
ಸಹಿ
ಶ್ರೀ ರವಿ,
ಸಾಧನಾ ಬುಕ್ ಹೌಸ್,
ನಂ. ೧೫/೧೬ , ಶಿವ ಕಾಂಪ್ಲೆಕ್ಸ್,
ಬಳೇ ಪೇಟೆ ಸರ್ಕಲ್,
ಬೆಂಗಳೂರು-೫೬೦೦೫೩
ಸಾಕ್ಷಿಗಳು: ೧, ೨, ನೋಟರಿ